2019 ಕ್ರಿಕೆಟ್ ವಿಶ್ವಕಪ್ ಗೆ ಸ್ಫೋಟಕ ಬ್ಯಾಟ್ಸಮನ್ ಯುವಿ ಕಮ್ ಬ್ಯಾಕ್!
ತೀವ್ರ ಕುತೂಹಲ ಕೆರಳಿಸಿರುವ 2019ರ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ಹಾಗೂ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಕಮ್ ಬ್ಯಾಕ್ ಮಾಡುವ ಗುರಿ ಹೊಂದಿದ್ದಾರೆ.

Published On :
ಕೋಲ್ಕತಾ: ತೀವ್ರ ಕುತೂಹಲ ಕೆರಳಿಸಿರುವ 2019ರ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ಹಾಗೂ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಕಮ್ ಬ್ಯಾಕ್ ಮಾಡುವ ಗುರಿ ಹೊಂದಿದ್ದಾರೆ.
ಈ ಬಗ್ಗೆ ಖಾಸಗಿ ಕಾರ್ಯಕ್ರಮದಲ್ಲಿ ಸ್ವತಃ ಯುವರಾಜ್ ಸಿಂಗ್ ಮಾತನಾಡಿದ್ದು, 2019ರ ವಿಶ್ವಕಪ್ ಟೂರ್ನಿ ವೇಳೆಗೆ ಟೀಂ ಇಂಡಿಯಾ ವಾಪಾಸ್ಸಾಗಲು ಯುವಿ ನಿರ್ಧರಿಸಿದ್ದಾರೆ. ಇದಕ್ಕಾಗಿ ಯುವಿ ಕಠಿಣ ಪ್ರಯತ್ನ ಆರಂಭಿಸಿದ್ದಾರೆ. ಐಪಿಎಲ್ ಮೂಲಕ ಮತ್ತೆ ಟೀಂ ಇಂಡಿಯಾಗೆ ಆಯ್ಕಯಾಗೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಕ್ರಿಕೆಟ್ ನನಗೆ ಎಲ್ಲವನ್ನೂ ಕೊಟ್ಟಿದೆ. ಹೀಗಾಗಿ ನಾನು ವಿದಾಯ ಹೇಳಿದ ಮೇಲೆ ನೋವು ಕಾಡುತ್ತಿರಬಾರದು. ಇದಕ್ಕಾಗಿ ಶ್ರೇಷ್ಠ ಮಟ್ಟದಲ್ಲೇ ವಿದಾಯ ಹೇಳಲು ಇಚ್ಚಿಸುತ್ತೇನೆ. ರಣಜಿ ಬಳಿಕ ಐಪಿಎಲ್ ಟೂರ್ನಿಯಿದೆ. ಟಿ20 ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ 2019ರ ವಿಶ್ವಕಪ್ ಟೂರ್ನಿಗೆ ಕಮ್ ಬ್ಯಾಕ್ ಮಾಡೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ 1 ಕೋಟಿ ರೂಪಾಯಿ ನೀಡಿ ಯುವರಾಜ್ ಸಿಂಗ್ ರನ್ನು ಖರೀದಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಭಾರತTeam IndiaKolkataಕೋಲ್ಕತಾYuvraj Singhಯುವರಾಜ್ ಸಿಂಗ್2019 ICC World Cup2019 ಐಸಿಸಿ ವಿಶ್ವಕಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


